ಇಂಡೋಲ್ ಅಸಿಟಿಕ್ ಆಮ್ಲ  

ಪೂರ್ಣ ಹೆಸರು 3-ಇಂಡೋಲ್ ಅಸಿಟಿಕ್ ಆಮ್ಲ (ಬೀಟ ಇಂಡೋಲ್ ಅಸಿಟಿಕ್ ಆಮ್ಲ. ಬೀಟ ಇಂಡೋಲೈಲ್ ಅಸಿಟಿಕ್ ಆಮ್ಲ). ಇದು ಆಕ್ಸಿನ್ ಗುಂಪಿಗೆ ಸೇರಿದ ಒಂದು ಪ್ರಮುಖ ಚೋದಕ ದ್ರವ. ಇದರ ರಾಸಾಯನಿಕಸೂತ್ರ ಅ8ಊ6ಓಅಊ2ಅಔಔಊ. ಈ ಆಮ್ಲ ಹರಳಿನ ರೂಪದಲ್ಲಿ ದೊರೆಯುತ್ತದೆ. ಹರಳುಗಳು 168ಲಿ-170ಲಿ ಸೆಂ. ಉಷ್ಣತೆಯಲ್ಲಿ ದ್ರವಿಸುತ್ತವೆ. ಇವು ನೀರಿನಲ್ಲಿ ವಿಲೀನವಾಗುವುದಿಲ್ಲ; ಆಲ್ಕೋಹಾಲ್ ಮತ್ತು ಈಥರ್‍ಗಳಲ್ಲಿ ವಿಲೀನವಾಗುತ್ತ್ತವೆ. ಈ ಚೋದಕ ದ್ರವಗಳು ಸಸ್ಯಗಳ ಬೆಳವಣಿಗೆಯನ್ನು ಪ್ರೇರೇಪಿಸುತ್ತವೆ. ನೆರಳಿನಲ್ಲಿ ಬೆಳೆಯುವ ಗಿಡಗಳ ಹಸಿರು ಕೊನೆಗಳಲ್ಲಿ ಮತ್ತು ಬೇರಿನ ಕೊನೆಗಳಲ್ಲಿ ಈ ಆಮ್ಲ ಸ್ವಾಭಾವಿಕವಾಗಿ ದೊರೆಯುತ್ತದೆ. ಹೆಚ್ಚಿನ ಸಾಂದ್ರಣದಲ್ಲಿ ಸಸ್ಯಗಳ ಬೆಳವಣಿಗೆಯನ್ನು ಇದು ನಿರೋಧಿಸುತ್ತದೆ. ಈ ಕಾರಣದಿಂದಾಗಿ ನಿರ್ಮೂಲ ಮಾಡಲು ಇದರ ಬಳಕೆ ಇದೆ. ತರಕಾರಿಗಳನ್ನು ಶೇಖರಿಸಿಡುವ ಸಮಯದಲ್ಲಿ ಅವು ಮೊಳಕೆಯೊಡೆಯದಂತೆ ಮಾಡಲೂ ಗಿಡದಲ್ಲಿ ಹಣ್ಣಿನ ಬೆಳವಣಿಗೆಯನ್ನು ಪ್ರೇರೇಪಿಸಲೂ ಆಮ್ಲವನ್ನು ಬಳಸುತ್ತಾರೆ.				
  
(ಎಚ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ